ಡಾ. ಮಂತರ್ ಗೌಡ ಮಡಿಕೇರಿಯ ವಿಧಾನಸಭಾ ಕ್ಷೇತ್ರದ ಶಾಸಕ. ವೃತ್ತಿಯಲ್ಲಿ ರೇಡಿಯೋಲಜಿಸ್ಟ್. == ವೈಯಕ್ತಿಕ ಜೀವನ == ಮಂತರ್ ಗೌಡ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರು. ಇವರು ಮಾಜಿ ಸಚಿವ ಎ ಮಂಜು ಅವರ ಪುತ್ರ. ರೇಡಿಯೋಲಜಿ ವಿಷಯದಲ್ಲಿ ಎಂ.ಡಿ ಪದವಿ ಪಡೆದಿದ್ದಾರೆ. ಮಂತರ್ ಅವರ ಪತ್ನಿ ಮಾಡೆಯಂಡ ನರೇಂದ್ರ (ನರೇನ್) ಮತ್ತು ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಂಡಳಿಯ ನಿವೃತ್ತ ನಿರ್ದೇಶಕಿ ಯಶೋದಾ ಬೋಪಣ್ಣ ಅವರ ಪುತ್ರಿ ದಿವ್ಯಾ. == ರಾಜಕೀಯ ಜೀವನ == 2021ರಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕೊಡಗಿನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಂತರ್ ಸ್ಪರ್ಧಿಸಿದ್ದರು. ಕೇವಲ 100 ಮತಗಳ ಅಂತರದಿಂದ ಸೋತಿದ್ದರು. ಕಾಂಗ್ರೆಸ್ ನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. == ಉಲ್ಲೇಖ ==